ಬುರಗುಂಟೆ ಗ್ರಾಮದ ಒಂದು ಮೂಲೆಯಲ್ಲಿ, ಬದಲಾವಣೆ ರೂಪಗೊಳ್ಳುತ್ತಿದೆ - ಇದು ಅಡುಗೆಮನೆಯ ತ್ಯಾಜ್ಯವನ್ನು ಭೂಮಿಗೆ ಪೋಷಣೆಯಾಗಿ ಪರಿವರ್ತಿಸುತ್ತಿದೆ ಮತ್ತು ಅದನ್ನು ಅಳವಡಿಸಿಕೊಂಡ ಮಹಿಳೆಯರ ಕುಟುಂಬಗಳಿಗೆ ಆ ಗೊಬ್ಬರವು ಹಿಂದಿರುಗಿ ಆಹಾರ ಒದಗಿಸುತ್ತಿದೆ. ಸರಳ ಸಂಭಾಷಣೆಯಾಗಿ ಪ್ರಾರಂಭವಾದ ಇದು ಈಗ ಲಲಿತಾ ಅಕ್ಕ ಎಂಬ ದೃಢನಿಶ್ಚಯವುಳ್ಳ ಮಹಿಳೆಯ ನೇತೃತ್ವದಲ್ಲಿ ಸಾಮೂಹಿಕ ಪ್ರಯತ್ನವಾಗಿ ವಿಕಸನಗೊಂಡಿದೆ. ಸರ್ಜಾಪುರದ ಆನೇಕಲ್ ತಾಲ್ಲೂಕಿನ ಬುರಗುಂಟೆ ಗ್ರಾಮದ ನಿವಾಸಿಗಳು, ನಗರ ಮತ್ತು ಪಟ್ಟಣಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ತ್ಯಾಜ್ಯ ವಿಲೇವಾರಿ ಅಭ್ಯಾಸವನ್ನು ಬಹಳ ಹಿಂದಿನಿಂದಲೂ ಅನುಸರಿಸುತ್ತಿದ್ದರು - ಅವರು ತಮ್ಮ ಮಿಶ್ರ ತ್ಯಾಜ್ಯವನ್ನು ಬಿಲ್ಲಾಪುರ ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸುವ ವಾಹನಕ್ಕೆ ಹಸ್ತಾಂತರಿಸುತ್ತಿದ್ದರು. ಈ ವಾಹನವು ಸಂಗ್ರಹಿಸಿದ ತ್ಯಾಜ್ಯವನ್ನು ಭೂಕುಸಿತಕ್ಕೆ ಸಾಗಿಸುತಿತ್ತು ಅಲ್ಲಿ ಆ ಕಸವನ್ನು ಎಸೆಯಲಾಗುತ್ತಿತು ಅಥವಾ ಸುಡಲಾಗುತಿತ್ತು. ಬುರುಗುಂಟೆಯಲ್ಲಿ ವಾಸಿಸುತ್ತಿರುವ ಸ್ಥಳೀಯರಿಗೆ ತಾವು ಅಳವಡಿಸಿಕೊಂಡ ತ್ಯಾಜ್ಯ ವಿಲೇವಾರಿಯ ಅಭ್ಯಾಸದಿಂದುಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವಿರಲಿಲ್ಲ, ಅನೇಕ ಜನರು ತ್ಯಾಜ್ಯವನ್ನು ಸಾರ್ವಜನಿಕ ಹಾಗೂ ಮನೆಯ ಅಂಗಳದಲ್ಲಿ ಬಿಸಾಡುವುದು ಮತ್ತು ಸುಡುತಿದ್ದರು, ಇದರಿಂದ ಅನೇಕ…
Read moreWe’re at 19 out of 100 donors. Will you be the next to contribute to our civic engagement work?