ಬದಲಾವಣೆಯ ಬೀಜಗಳು: ಸರ್ಜಾಪುರದ ಗ್ರಾಮವು ತನ್ನ ತ್ಯಾಜ್ಯವನ್ನು ಪೋಷಣೆಯಾಗಿ ಪರಿವರ್ತಿಸಿದ್ದು ಹೇಗೆ?

ಬುರಗುಂಟೆಯಲ್ಲಿ, ಲಲಿತಾ ಅಕ್ಕ ನೇತೃತ್ವದಲ್ಲಿ ಮಹಿಳೆಯರು ಅಡುಗೆಮನೆಯ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುತ್ತಿದ್ದಾರೆ, ಭೂಮಿಯನ್ನು ಪುನರ್ವಶಮಾಡುತಿದ್ದಾರೆ, ಮತ್ತು ಆಹಾರ ಭದ್ರತೆ ಮತ್ತು ಪೌಷ್ಠಿಕಾಂಶವನ್ನು ಹೆಚ್ಚಿಸುತಿದ್ದಾರೆ.

ಬುರಗುಂಟೆ ಗ್ರಾಮದ ಒಂದು ಮೂಲೆಯಲ್ಲಿ, ಬದಲಾವಣೆ ರೂಪಗೊಳ್ಳುತ್ತಿದೆ – ಇದು ಅಡುಗೆಮನೆಯ ತ್ಯಾಜ್ಯವನ್ನು ಭೂಮಿಗೆ ಪೋಷಣೆಯಾಗಿ ಪರಿವರ್ತಿಸುತ್ತಿದೆ ಮತ್ತು ಅದನ್ನು ಅಳವಡಿಸಿಕೊಂಡ ಮಹಿಳೆಯರ ಕುಟುಂಬಗಳಿಗೆ ಆ ಗೊಬ್ಬರವು ಹಿಂದಿರುಗಿ ಆಹಾರ ಒದಗಿಸುತ್ತಿದೆ. ಸರಳ ಸಂಭಾಷಣೆಯಾಗಿ ಪ್ರಾರಂಭವಾದ ಇದು ಈಗ ಲಲಿತಾ ಅಕ್ಕ ಎಂಬ ದೃಢನಿಶ್ಚಯವುಳ್ಳ ಮಹಿಳೆಯ ನೇತೃತ್ವದಲ್ಲಿ ಸಾಮೂಹಿಕ ಪ್ರಯತ್ನವಾಗಿ ವಿಕಸನಗೊಂಡಿದೆ. 

ಸರ್ಜಾಪುರದ ಆನೇಕಲ್ ತಾಲ್ಲೂಕಿನ ಬುರಗುಂಟೆ ಗ್ರಾಮದ ನಿವಾಸಿಗಳು, ನಗರ ಮತ್ತು ಪಟ್ಟಣಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ತ್ಯಾಜ್ಯ ವಿಲೇವಾರಿ ಅಭ್ಯಾಸವನ್ನು ಬಹಳ ಹಿಂದಿನಿಂದಲೂ ಅನುಸರಿಸುತ್ತಿದ್ದರು – ಅವರು ತಮ್ಮ ಮಿಶ್ರ ತ್ಯಾಜ್ಯವನ್ನು ಬಿಲ್ಲಾಪುರ ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸುವ ವಾಹನಕ್ಕೆ ಹಸ್ತಾಂತರಿಸುತ್ತಿದ್ದರು. ಈ ವಾಹನವು ಸಂಗ್ರಹಿಸಿದ ತ್ಯಾಜ್ಯವನ್ನು ಭೂಕುಸಿತಕ್ಕೆ ಸಾಗಿಸುತಿತ್ತು ಅಲ್ಲಿ ಆ ಕಸವನ್ನು ಎಸೆಯಲಾಗುತ್ತಿತು ಅಥವಾ ಸುಡಲಾಗುತಿತ್ತು.

ಬುರುಗುಂಟೆಯಲ್ಲಿ ವಾಸಿಸುತ್ತಿರುವ ಸ್ಥಳೀಯರಿಗೆ ತಾವು ಅಳವಡಿಸಿಕೊಂಡ ತ್ಯಾಜ್ಯ ವಿಲೇವಾರಿಯ ಅಭ್ಯಾಸದಿಂದುಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವಿರಲಿಲ್ಲ, ಅನೇಕ ಜನರು ತ್ಯಾಜ್ಯವನ್ನು ಸಾರ್ವಜನಿಕ ಹಾಗೂ ಮನೆಯ ಅಂಗಳದಲ್ಲಿ ಬಿಸಾಡುವುದು ಮತ್ತು ಸುಡುತಿದ್ದರು, ಇದರಿಂದ ಅನೇಕ ರೀತಿಯ ದುಷ್ಪರಿಣಾಮಗಳು ಅಂದರೆ ಪರಿಸರ ಮಾಲಿನ್ಯ, ಸುತ್ತಮುತ್ತಲಿನ ಭೂಮಿ, ಗಾಳಿಯನ್ನು ಕಲುಷಿತಗೊಳಿಸುವುದು ಹಾಗೂ ನೀರಿನ ಮೂಲಗಳ ಮೇಲೆ  ಅನೇಕ  ದುಷ್ಪರಿಣಾಮವನ್ನುಂಟುಮಾಡುತಿತ್ತು. 

ಅಜಿಮ್ ಪ್ರೇಮ್ಜಿ ವಿಶ್ವವಿದ್ಯಾನಿಲಯದಲ್ಲಿ (ಎಪಿಯು) ನಾವು ಪೇರಿ-ಅರ್ಬನ್ ಗ್ರಾಮದಲ್ಲಿ ತ್ಯಾಜ್ಯ ಪ್ರಕ್ರಿಯೆಗಳ ಅಧ್ಯಯನ ನಡೆಸುತ್ತಿದ್ದಾಗ, ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು  ತ್ಯಾಜ್ಯ ಉತ್ಪಾದಕರಿಗೆ ವರ್ಗಾಯಿಸುವುದು ನಮ್ಮ ಉದ್ದೇಶವಾಗಿತ್ತು.  ಹಸಿರು ದಳ ಮತ್ತು ಬಿಲ್ಲಾಪುರ ಪಂಚಾಯತ್ ಸಹಯೋಗದೊಂದಿಗೆ, ಸಂಶೋಧಕರು, ಮತ್ತು ಎಪಿಯು ಇಂಟರ್ನ್ ಅಕ್ಷಯ, ಗ್ರಾಮದ ಮಹಿಳೆಯರೊಂದಿಗೆ ಸೇರಿ ಹೆಚ್ಚು ಸುಸ್ಥಿರ ಮತ್ತು ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗುವ ಬಗ್ಗೆ ಗ್ರಾಮದ ಮಹಿಳೆಯರಿಗೆ ಮಾರ್ಗದರ್ಶನ ಮಾಡಿ ಸಹಕರಿಸಿದರು.

ಜಾಗೃತಿ ಕಾರ್ಯಕ್ರಮಗಳು ಮಹಿಳೆಯರಿಗೆ ತ್ಯಾಜ್ಯ ಹಾಗೂ ಸಾವಯುವ ಗೊಬ್ಬರದ ಬಗ್ಗೆ ಪರಿಕಲ್ಪನೆ ಮೂಡಿಸಿದವು, ಅವರು ಈ ಕ್ರಮಗಳ ಮಹತ್ವವನ್ನು ಅರ್ಥಮಾಡಿಕೊಂಡರೂ ಕೂಡ ಅದನ್ನು ಕಾರ್ಯಾಗತಗೊಳಿಸಲು ಗ್ರಾಮದ ಮಹಿಳೆಯರಿಗೆ ಸಮಯ, ಇಚ್ಚಾಶಕ್ತಿ ಸವಾಲಾದವು, ಹಾಗೂ  ಬಿಡುವಿಲ್ಲದ  ವೇಳಾಪಟ್ಟಿ ಸಂಭಾಷಣೆಗೆ ವೇದಿಕೆಯ ಹಂಚಿಕೆ ಕೊರತೆ  ಮುಂತಾದವುಗಳು ಈ ಕೆಲಸವನ್ನು ಕಾರ್ಯಗತಗೊಳಿಸಲು ತಡೆಗೋಡೆಯನ್ನೇ ಸೃಷ್ಟಿಮಾಡಿದವು

ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಿಂದ ಬುರಗುಂಟೆ ಗ್ರಾಮದ ಮಹಿಳೆಯರಿಂದ ತ್ಯಾಜ್ಯ ವಿಂಗಡಣೆ ಮತ್ತು ಮಿಶ್ರಗೊಬ್ಬರ ಜಾಗೃತಿ ಅಧಿವೇಶನ. ಚಿತ್ರ: ಮಾನಸಿ ಪಟೇಲ್.

Read more: How a community initiative is working towards a cleaner Elephanta Island


ಸತತ ಪರಿಶ್ರಮಕ್ಕೆ ಫಲ ಸಿಗುತ್ತದೆ

ಇದೇ ವೇಳೆ, ಅಕ್ಷಯಾ ಮಹಿಳೆಯರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ, ತ್ಯಾಜ್ಯವನ್ನು ಸಾವಯುವ ಗೊಬ್ಬರವನ್ನಾಗಿ ಪರಿವರ್ತಿಸಲು ಹಲವಾರು ಪ್ರಯತ್ನಗಳನ್ನು ಮಾಡಿದಳು. ಈ ಕಾರಣಕ್ಕಾಗಿ ನೀಡಿದ ಅನೇಕ ಕಾರ್ಯಾಗಾರಗಳು ಹಾಗೂ ಬೆಳಗ್ಗಿನ ಭೇಟಿಗಳು ಅಫಲಕಾರಿಯಾದವು, ಕಾರಣ, ಮಹಿಳೆಯರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಸಂಜೆಯ ಸಮಯ ಹೆಚ್ಚು ಅನುಕೂಲಕರವಾಗಿರಬಹುದೆಂದು ತೋರಿತ್ತಾದರೂ ಪುನಃ ಪುನಃ ಪ್ರಯತ್ನಿಸಿದಾಗ ದೃಢವಾದ ನಿರಾಕರಣೆಗಳು ಎದುರಾದವು. ಆದರೆ ಒಂದು ಆಕಸ್ಮಿಕ ಸಮಯವೂ ಈ ಎಲ್ಲವನ್ನೂ ಬದಲಾಯಿಸಿತು.

ಹೀಗಿರುವಾಗ ಒಂದು ದಿನ ಅಕ್ಷಯಾ  ಬುರುಗುಂಟೆಯ ನಿವಾಸಿಯಾದ ಜ್ಯೋತಿ ಅಕ್ಕ ಅವರ ಮನೆಯ ಮುಂದುಗಡೆ ನಿಂತಿರುವಾಗ, ಅಜಿಮ್ ಪ್ರೇಮಜಿ ಸ್ಕೂಲಿನಲ್ಲಿ ಓದುತ್ತಿರುವ ಜ್ಯೋತಿಯ ಮಗಳು ಅಕ್ಷಯಳನ್ನು ಗುರುತಿಸಿ ಮನೆಯ ಒಳಗಡೆ ಓಡಿ ಹೋಗಿ ತನ್ನ ಅಮ್ಮನನ್ನು ಹೊರಗಡೆ ಕರೆತಂದು ಅಕ್ಷಯಾಳ ಜೊತೆ ಮಾತನಾಡುವಂತೆ ಮನವೊಲಿಸಿದಳು ಈ ಸಣ್ಣ ಕ್ಷಣವು ಒಂದು ದೊಡ್ಡ ತಿರುವಿಗೆ  ಕಾರಣವಾಯಿತು

ಅಕ್ಷಯಾ ಈ ಅವಕಾಶವನ್ನು ಬಳಸಿಕೊಂಡು ಅಲ್ಲಿ ವಾಸಿಸುತ್ತಿಯುರುವ ಹಾಗೂ ಬುರುಗುಂಟೆಯ ಸ್ಥಳೀಯರಾದ 8-10 ಮಹಿಳೆಯರನ್ನು ಒಟ್ಟುಗೂಡಿಸಿ ಸಾವಯುವ ಗೊಬ್ಬರದ ಮಹತ್ವದ ಬಗ್ಗೆ ಹಾಗೂ ಅದರ ತಯಾರಿಕೆಯ ಬಗ್ಗೆ ಹೇಳಿದಳು ಆ ಗುಂಪಿನಲ್ಲಿ ಪ್ರಮುಖರೆಂದರೇ   40 ರ  ಹರೆಯದ ಅಂಗನವಾಡಿ ಶಿಕ್ಷಕಿ ಲಲಿತಾ ಅಕ್ಕ ಮತ್ತು ಅವರ ಮನೆಯ  ಒಂದು  ಭಾಗವನ್ನು ಬಾಡಿಗೆಗೆ ಪಡೆದ ಇತರ ಮೂವರು ಮಹಿಳೆಯರು – ಪ್ಯಾರಿಮಾ, ರಜಿಯಾ ಮತ್ತು ಶಾಹಿನಾ.

ಅಧಿವೇಶನದ ಅಂಗವಾಗಿ ಮಹಿಳೆಯರಿಗೆ ಕೆಲವು ಕಸದಿಂದ ತುಂಬಿ ಹರಿಯುವ ಲ್ಯಾಂಡ್ಫೈಲ್ಗಳ   ಚಿತ್ರಗಳು   ಹಾಗೂ ವಿಡಿಯೋಗಳನ್ನ,  ಮತ್ತು ಹಸುವಿನ ಹೊಟ್ಟೆಯಿಂದ 50 ಕೆಜಿ ಪ್ಲಾಸ್ಟಿಕ್ ಹೊರತೆಗೆದ ಚಿತ್ರ, ಕಸ ಆಯುವವರ ದುಃಸ್ಥಿತಿ ಬಗ್ಗೆ ಚರ್ಚಿಸಿದಾಗ ಈ ಅಧಿವೇಶನವು ಅವರಲ್ಲಿ ಆಳವಾಗಿ ಪ್ರತಿಧ್ವನಿಸಿತ್ತು.  ಈ ಎಲ್ಲವೂ ಅವರನ್ನು ದಿನನಿತ್ಯ ತಾವು ಉಂಟುಮಾಡುವ ತ್ಯಾಜ್ಯವು ಜನರ ಜೀವನದ ಮೇಲೆ ಮತ್ತು ತಮ್ಮ ರಸ್ತೆಗಳಲ್ಲಿ ಕಾಣುವ ಪ್ರಾಣಿಗಳ ಮೇಲೆ ಎಷ್ಟು ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಆಲೋಚಿಸಲು ಪ್ರೇರೇಪಿಸಿತು. ಈ ಅಧಿವೇಶನು ಮಾಲಿನ್ಯದ ಬಗ್ಗೆ ಅಲ್ಲದೆ ಮಾನವೀಯತೆ ಬಗ್ಗೆ ಕೂಡ ವೈಯಕ್ತಿಕವಾಗಿ ಮನ ಮುಟ್ಟಿತು

ಸಾಮೂಹಿಕ ಕ್ರಿಯೆ

ಅಧಿವೇಶನದಿಂದ ಪ್ರೇರಿತರಾದ ಲಲಿತ ಅಕ್ಕ, ಪ್ಯಾರಿಮಾ, ರಜಿಯಾ ಮತ್ತು ಶಹೀನಾ ಅವರು ತಾವು ಪಡೆದುಕೊಂಡ ಹೊಸ ಜ್ಞಾನವನ್ನು ಆಧರಿಸಿ ಕ್ರಮ ಕೈಗೊಳ್ಳಲು ನಿರ್ಧರಿಸಿದರು. ಇವರು ಅಕ್ಕಪಕ್ಕ ಹಾಗು ನೆರೆಹೊರೆಯವರಾಗಿದ್ದು ಲಲಿತಾ ಅಕ್ಕಳ ಬಳಿಯಿಂದ ಬಳಕೆಯಾಗದ ಡ್ರಮನ್ನು ಬಳಸಿಕೊಂಡು ಅದನ್ನು ಸ್ವಚ್ಛಗೊಳಿಸಿ ಗೊಬ್ಬರದ ತಯಾರಿಕೆಗೆ ಮೀಸಲಿಟ್ಟರು, ತದನಂತರ ಈ ಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ತಾವು ಎದುರಿಸಬಹುದಂತಹ ಸಮಸ್ಯೆಗಳಾದ ಗೊಬ್ಬರದ ತಯಾರಿಕೆಯಲ್ಲಿ ಉಂಟಾಗುವ ದುರ್ವಾಸನೆ, ಬಳಸಬೆಕಾದ ವನ ತ್ಯಾಜ್ಯದ ವಿಧಗಳು, ಹಾಗೂ ಎಲ್ಲಕಿಂತ ಮುಖ್ಯವಾಗಿ ಉತ್ಪಾದಿಸಿದ ಸಾವಯುವ ಗೊಬ್ಬರವನ್ನು ಏನು ಮಾಡಬೇಕು? ಎಂಬುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು

ಪ್ಯಾರಿಮ ಎಲ್ಲರಿಗೂ ಅನುಸರಿಸುವ ರೀತಿಯಲ್ಲಿ ಒಂದು ಉಪಾಯವನ್ನು ಸೂಚಿಸಿದರು. ಇಗಾಗಲೇ ಮನೆಯ ಹಿತ್ತಲಲ್ಲಿ ಬೆಳೆದಿರುವ ಕಾಡುಹೂವುಗಳು ಮತ್ತು ಬೇಸಾಯವಾಗದ ಸಸ್ಯಗಳನ್ನು ತೆಗೆದು, ಆ ಜಾಗವನ್ನು ಸಸ್ಯ ತೋಟವನ್ನಾಗಿ ಯಾಕೆ ಪರಿವರ್ತಿಸಬಾರದು? ಹೀಗೆ ತಯಾರಾದ ಗೊಬ್ಬರವನ್ನು ಯಾಕೆ ಸಸ್ಯತೋಟಕ್ಕೆ ಬಳಸಿಕೊಳ್ಳಬಾರದು? ಇದರಿಂದ ನಾವು ರಾಸಾಯನಿಕ ಮುಕ್ತ ತರಕಾರಿಗಳನ್ನು ಬೆಳೆಯಬಹುದಲ್ಲವೇ? ಈ ರೀತಿ ಮಾಡುವುದರಿಂದ ಮಾಲೀಕತ್ವ ಹಾಗೂ ಜವಾಬ್ದಾರಿ ಹಂಚಿಕೆಯ ಪ್ರಜ್ಞೆ ಎಲ್ಲರಲ್ಲೂ ಸೃಷ್ಟಿಸಲು ನೆರವಾಗುತ್ತದೆ. ಪ್ಯಾರಿಮಳಾ ಈ ಆಲೋಚನೆಗೆ ಎಲ್ಲರೂ ಯೋಚಿಸಿ ಧೃಡವಾಗಿ ಒಪ್ಪಿಗೆ ನೀಡಿದರು. 

ಪ್ರತಿಯೊಬ್ಬರೂ ಈ ಆಲೋಚನೆಯ ಬಗ್ಗೆ ಉತ್ಸುಕರಾದರು, ಅವರ ಮನಸ್ಥಿತಿಯಲ್ಲಿ ಈಗ ಒಂದು ಗಮನಾರ್ಹ ಬದಲಾವಣೆ ಕಂಡುಬಂದಿತ್ತು. ಸಾವಯುವ ಗೊಬ್ಬರವೆನ್ನೋದು ಬರೀ ತ್ಯಾಜ್ಯವನ್ನು ಕಡಿಮೆ ಮಾಡುವುದಷ್ಟೇ ಅಲ್ಲ. ಅದು ಆಹಾರ ಭದ್ರತೆ, ಆರೋಗ್ಯ, ಹಾಗೂ ಸಮುದಾಯದ ಸಬಲೀಕರಣವೆಂದು ಅವರಿಗೆ ಅರಿವಾಯಿತು. ಇದಲ್ಲದೇ ಕುಟುಂಬಕ್ಕಾಗಿ ತಮ್ಮ ಸ್ವಂತ ಹಿತ್ತಲಿನಲ್ಲೇ ಕೈಗೆಟುಕುವ   ಉತ್ತಮ ಗುಣಮಟ್ಟದ ತರಕಾರಿ ಬೆಳೆಯುವುದು, ಈ ಸಾವಯುವ ಗೊಬ್ಬರದ ತಯಾರಿಕೆಯನ್ನು ಅಳವಡಿಸಿಕೊಳ್ಳಲು ಒಂದು ದೊಡ್ಡ ಪ್ರೇರಣೆಯಾಯಿತು.

women collect leaves for composting - to a lush vegetable garden
ಪೋಷಣೆಗೆ ತ್ಯಾಜ್ಯ, ಬುರಗುಂಟೆ ಗ್ರಾಮ. ಚಿತ್ರ: ಮಾನಸಿ ಪಟೇಲ್.

Read more: How the people of Kannamangala are setting an example in sustainable waste management


ಪ್ರಾಯೋಗಿಕ ಸವಾಲುಗಳನ್ನು ನಿವಾರಿಸುವುದು

ಆದಾಗ್ಯೂ, ಕಂಪೋಸ್ಟಿಂಗ್ ಡ್ರಮ್ ಸ್ಥಾಪಿಸುವ ಕೆಲಸವೂ ಇನ್ನೂ ಪ್ರಯತ್ನದ ಅಗತ್ಯವಿತ್ತು. ಡ್ರಮ್‌ಗೆ ಅಗತ್ಯವಿರುವ ರಂಧ್ರಗಳನ್ನು ತೋರೆಯುವಂತೆ ಮಹಿಳೆಯರನ್ನು ಪ್ರೇರೇಪಿಸಲು ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ತಂಡ ಇನ್ನೊಂದು ವಾರ ಸಹನೆಸಹಿತ ಮನವಿಮಾಡಬೇಕಾಯಿತು. ಅಂತಿಮವಾಗಿ, ಎರಡು ದಿನಗಳ ಕಾಲ ಅಡಿಗೆಮನೆಯ ತ್ಯಾಜ್ಯ ಮತ್ತು ಒಣ ಎಲೆಗಳನ್ನು ಸಂಗ್ರಹಿಸಿದ ನಂತರ, ಅಕ್ಷಯಾಳ ಮಾರ್ಗದರ್ಶನದಲ್ಲಿ ಮಹಿಳೆಯರು ತಮ್ಮ ಮೊದಲ ಕಂಪೋಸ್ಟ್ ಬ್ಯಾಚ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದರು. ಗೊಬ್ಬರ ತರಿಸುವ ಆರಂಭದ ದಿನಗಳಲ್ಲುಂಟಾಗುವ ಅಡಚಣೆಗಳು ದೂರಾದವು, ಬುರುಗುಂಟೆ ಗ್ರಾಮದ ಮಹಿಳೆಯರು ಹೆಜ್ಜೆಯನ್ನು ಹಿಂತೆಗೆದುಕೊಳ್ಳದೆ ತಮ್ಮ ಹಿತ್ತಲನ್ನು  ಮತ್ತು ತಮ್ಮ ಜೀವನವನ್ನೇ ತ್ಯಾಜ್ಯದಿಂದ ಸಂಪತ್ತುಮಾಡುವ ದಿಕ್ಕಿನಲ್ಲಿ, ಒಂದು  ಕಂಪೋಸ್ಟ್ ಬಿನ್ನ್ನಲ್ಲಿ ಗೊಬ್ಬರ ಮಾಡುವ  ಮೂಲಕ, ಸುಸ್ಥಿರ ಜೀವನಶೈಲಿಯ ದಿಕ್ಕಿಗೆ ಕಾಲಿಟ್ಟರು .

ನಲವತ್ತೈದು ದಿನಗಳ ನಂತರ

ಪುನಃ ಭೇಟಿ ನೀಡಿದಾಗ, ಅವರ ಪ್ರಯತ್ನಗಳ ಹಳೆತಿನ ಫಲಿತಾಂಶಗಳು ಸ್ಪಷ್ಟವಾಗಿ ಕಾಣಿಸಿದವು, ಸೂಕ್ತವಾದ ಡ್ರಮ್ ಅನ್ನುಹುಡುಕುವುದರಿಂದ ಹಿಡಿದು ರಂಧ್ರಗಳನ್ನು ಕೊರೆಯುವ ಕಷ್ಟಕರ ಕೆಲಸದವರೆಗೂ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಅನೇಕ ಅಡೆತಡೆಗಳುoಟಾದರೂ ಕೂಡ ಈ ಕೆಲಸವನ್ನು ಮುಂದುವರೆಸಿದ ಲಲಿತಾಕ್ಕ ಇತ್ತೀಚೆಗೆ ಈ ಸಂಪೂರ್ಣ ಪ್ರಕ್ರಿಯೆಯಿಂದ ಪಡೆದ ತೃಪ್ತಿಯ ಬಗ್ಗೆ ಮಾತನಾಡಿದರು.

ಆರಂಭದ ನಿರಾಶೆ ಈಗ ಸಾಧನೆಯ ಭಾವನೆಗೆ ಮತ್ತು ಕಾರ್ಯಸಾಧನೆಯ ಸುಲಭತೆಗೆ ತಿರುಗಿಬಿಟ್ಟಿತ್ತು. ಮಹಿಳೆಯರು ತಮ್ಮ ತ್ಯಾಜ್ಯಕ್ಕೆ ವೈಯಕ್ತಿಕವಾಗಿ ಜವಾಬ್ದಾರರೆಂದು ಭಾವಿಸಿ, ಸಾವಯುವ ಗೊಬ್ಬರವನ್ನು ತಯಾರಿಸಲು ಹಾಗೂ ಅದನ್ನು ತಮ್ಮ ಹಿತ್ತಲಿನ ತೋಟದಲ್ಲಿ ಬಳಸಲು ಉತ್ಸುಕರಾ ದರು. ಹಿಂದೆ ತ್ಯಾಜ್ಯವನ್ನು ಕಾಳಜಿಯಿಲ್ಲದೇ ಎಸೆಯುತ್ತಿದ್ದ ಪ್ಯಾರಿಮಾ, ಶಹೀನಾ ಮತ್ತು ರಜಿಯಾ ಈಗ ತಮ್ಮ ಅಡಿಗೆಮನೆಯ ತ್ಯಾಜ್ಯವನ್ನು ಶ್ರದ್ಧೆಯಿಂದ ಸಂಗ್ರಹಿಸಿ ಕಂಪೋಸ್ಟ್ ಡ್ರಮ್‌ನಲ್ಲಿ ಹಾಕುತ್ತಿದ್ದಾರೆ. ಇನ್ನು ಅಡುಗೆ ಮನೆಯ ಉಳಿದ ಹಾಗೂ ಚೆನ್ನಾಗಿರುವ ಆಹಾರ ಪದಾರ್ಥವನ್ನು ಪವಿತ್ರವೆಂದು ಪರಿಗಣಿಸಿ ಅದನ್ನು ಹಸುಗಳಿಗೆ ನೀಡುತ್ತಿದ್ದಾರೆ.

ಈ ನಾಲ್ಕು ಮಹಿಳೆಯರಷ್ಟೆ ಅಲ್ಲದೆ — ಇವರ ಉದಾಹರಣೆಯಿಂದ ಪ್ರೇರಿತವಾಗಿ ಮತ್ತು  ಮನೆಮನೆ ಜಾಗೃತಿ ಅಭಿಯಾನಗಳಿಂದ ಸ್ಪೂರ್ತಿ ಪಡೆದಂತೆ ಗ್ರಾಮದ ಇತರ ಹಲವಾರು ಮಹಿಳೆಯರೂ ಹಾಗೂ ಹಳ್ಳಿಯ ಇನ್ನೂ ಅನೇಕರು ಈಗ ಸಮುದಾಯ ಆಧಾರಿತ ಕಂಪೋಸ್ಟಿಂಗ್ ಪ್ರಾರಂಭಿಸಿದ್ದಾರೆ.

women drilling holes in the drum
ಲಲಿತಾ ಅಕ್ಕ ಮತ್ತು ತಂಡವು ಬಳಸದ ಡ್ರಮ್ ಅನ್ನು ಕಾಂಪೋಸ್ಟ್ ಬಿನ್ ಆಗಿ ಪರಿವರ್ತಿಸುತ್ತಿದೆ. ಚಿತ್ರ: ಮಾನಸಿ ಪಟೇಲ್.

ಮುಂದಿನ ಹಂತ: ಜಾಗೃತಿ ಮೂಡಿಸುವುದು

ಲಲಿತಾ ಅಕಳ ಉತ್ಸಾಹವು ಪ್ಯಾರಿಮಾಳಿಗೆ ಪ್ರೇರಣೆಯಾಗಿದ್ದು, ಈ ಸಾವಯುವ ಗೊಬ್ಬರದ ತಯಾರಿಕೆಯ ಅನುಭವವನ್ನು ತಾನು ಮನೆಯ ಕೆಲ್ಸದವಳಾಗಿ ಕೆಲಸ ಮಾಡುತಿದ್ದ ಚಂಬೇನಹಳ್ಳಿ ಅಪಾರ್ಟ್ಮೆಂಟ್ ನ ಸಹೋದ್ಯೋಗಿಗಳೊಂದಿಗೆ   ಹಂಚಿಕೊಳ್ಳಲು ಪ್ರೇರೇಪಿಸಿತು. ಅವಳ ಸಹೋದ್ಯೋಗಿಗಳು ಆಸಕ್ತಿಯನ್ನು ತೋರಿಸಿದರು ಕೂಡಾ “ತಯಾರಾದ ಸಾವಯುವ ಗೊಬ್ಬರವನ್ನು ಸಸ್ಯ ಹಾಗೂ ಸಸ್ಯತೋಟವಿಲ್ಲಾದರೆ ಏನು ಮಾಡುವುದು?” ಎಂಬ ಸವಾಲನ್ನೆದುರುಮಾಡಿತು?

ಈ ಪ್ರಶ್ನೆ ಲಲಿತ ಅಕ್ಕನಿಗೆ ಒಂದು ಹೊಸ ಆಲೋಚನೆ ನೀಡಿತು —ಸಸ್ಯ ಹಾಗೂ  ಸಸ್ಯತೋಟವಿರದವರು ಕೂಡಾ ಕಂಪೋಸ್ಟಿಂಗ್‌ನ ಲಾಭವನ್ನು ಹೇಗೆ ವಿವರಿಸಬಹುದು ಎಂಬ ಬಗ್ಗೆ ಯೋಚಿಸಲು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿಸುವುದರಿಂದಾಗುವ ಉಪಯೋಗಗಳು ಹಾಗೂ ತಯಾರಿಸಿದ ಸಾವಯುವ ಗೊಬ್ಬರವನ್ನು ಮಾರಾಟ ಮಾಡಿ ಅದರಿಂದ ಹೇಗೆ ಲಾಭಘಳಿಸಿಕೊಳ್ಳುವುದು? ಎನ್ನುವುದರ ಬಗ್ಗೆ ತಿಳಿಸಿದರು. ಗೊಬ್ಬರವನ್ನು ತಯಾರಿಸುವುದಕ್ಕೆ ಕೇವಲ ಐದು ನಿಮಿಷಗಳು ಬೇಕಾಗುತ್ತವೆ – ಅಡುಗೆಮನೆಯ ಚೂರುಗಳು, ಒಣ ಎಲೆಗಳನ್ನು ಸೇರಿಸುವುದು ಮತ್ತು ವಾರಕ್ಕೊಮ್ಮೆ ಮಿಶ್ರಣ ಮಾಡುವುದು, ಅದಷ್ಟೇ – ನಮ್ಮ ದೈನಂದಿನ ದಿನದ ಕೇವಲ ಐದು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಹೊರತು ಬೇರೆ ರೀತಿಯ ಕಷ್ಟಪಡಬೇಕಿಲ್ಲ, ಇದಕ್ಕೆ ಪ್ರತಿಯಾಗಿ ಈ ಅಭ್ಯಾಸವನ್ನು ಅಳವಡಿಸಿಕೊಂಡ ಜನರು ಪರಿಸರದ ಉತ್ತಮ ಬದಲಾವಣೆಗೆ ಸಹಾಯ ಮಾಡುವುದಲ್ಲದೆ ಮಿಶ್ರ ತ್ಯಾಜ್ಯವನ್ನು ಕಡಿಮೆ ಮಾಡಲು ನೆರವಾಗುತ್ತಾರೆ ಎಂದು ಪ್ಯಾರಿಮಾಳ ಜೊತೆ ಹಂಚಿಕೊಂಡರು

ಮಾನಸಿ ಪಟೇಲ್ ಕುರಿತು

ಮಾನಸಿ ಪಟೇಲ್ ಅವರು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಸಮುದಾಯ ತೊಡಗಿಸಿಕೊಳ್ಳುವಿಕೆ ಉಪಕ್ರಮದೊಂದಿಗೆ ಸಂಶೋಧನಾ ಸಹಾಯಕರಾಗಿದ್ದಾರೆ. ಅವರ ಪ್ರಾಥಮಿಕ ಕೆಲಸವು ತ್ಯಾಜ್ಯದ ಬಗ್ಗೆ ಸ್ಥಳೀಯ ಸಮುದಾಯದ ದೃಷ್ಟಿಕೋನ ಮತ್ತು ನಡವಳಿಕೆಯನ್ನು ಅರ್ಥಮಾಡಿಕೊಳ್ಳುವತ್ತ ಗಮನ ಹರಿಸುತ್ತದೆ. ನೀತಿ ಮಟ್ಟದ ಬದಲಾವಣೆಗಳನ್ನು ತರಲು ಸ್ಥಳೀಯ ಸರ್ಕಾರಿ ಸಂಸ್ಥೆಗಳಿಗೆ ಸಹಾಯ ಮಾಡುವಾಗ ಸಂಬಂಧವನ್ನು ಬೆಳೆಸಲು, ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಮುದಾಯಕ್ಕೆ ಸಾವಯುವ ಗೊಬ್ಬರ ಮತ್ತು ಸುಸ್ಥಿರ ಅಭ್ಯಾಸಗಳನ್ನು ಪ್ರೋತ್ಸಾಹಿಸಲು ಸಮುದಾಯ ಕೇಂದ್ರಿತ ಅಭ್ಯಾಸವನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

For more details or guidance on composting reach out to mansi.patel@apu.edu.in/megha.ca@apu.edu.in.

[This article was translated by Megha Alloli and Uma Mani; you can find the original article is English here.]

Also read:

Leave a Reply

Your email address will not be published. Required fields are marked *

Similar Story

Community-led segregation helps Mumbai’s informal settlement clean its neighbourhood

In Mumbai’s Bhim Nagar, residents join Green Communities Foundation to segregate waste, plugging gaps left by BMC’s system.

On a Friday mid-morning in Bhim Nagar, a hillside settlement in Mumbai's Ghatkopar, a small community room is abuzz with activity. Families stream in, some with children in tow, all carrying sacks filled with dry waste. Volunteers weigh the waste and make a note of the quantity. This bustling scene is part of a waste segregation initiative that Green Communities Foundation (GCF), a non-profit organisation working in sustainable waste management, is running in partnership with the community.   The Brihanmumbai Municipal Corporation (BMC) is responsible for providing solid waste management services in Bhim Nagar, an informal settlement. However, there are major…

Similar Story

Bengaluru’s SwachaGraha: 10 years of citizen action for sustainability

Three words that sparked a citizen-led waste management movement across homes and communities: compost, grow, cook.

Ten years ago, in 2016, SwachaGraha began with a simple yet powerful invitation: “Start a green spot.” It started as a call to action for individuals, families, and neighbourhoods to look at waste differently, not as garbage, but as a resource: one compost bin, one garden, and one shared meal at a time, to turn everyday habits into acts of care for the planet. Compost: The first 'green spot' begins right in your kitchen, where vegetable peels and food scraps are transformed into nutrient-rich compost. Grow: The second 'green spot' takes root in your garden, balcony, or terrace, where that…