ಬೆಂಗಳೂರಿನ ಸಮಗ್ರ ಸಾರಿಗೆ ಯೋಜನೆ ಕರಡು: ಕೆಲವು ಪಾದಚಾರಿ ಯೋಜನೆಗಳು

ಹಿಂದಿನ ಸಾರಿಗೆ ಯೋಜನೆಗಳಿಗಿಂತ ಭಿನ್ನವಾಗಿ, ಹೊಸ ಕರಡು ಸಮಗ್ರ ಸಾರಿಗೆ ಯೋಜನೆ (ಸಿಎಂಪಿ) ಪಾದಚಾರಿ ಮತ್ತು ಸೈಕ್ಲಿಂಗ್ ಮೂಲಸೌಕರ್ಯವನ್ನು ಪ್ರಸ್ತಾಪಿಸುತ್ತದೆ. ಪಾದಚಾರಿಗಳಿಗೆ ಮೀಸಲು ಬೀದಿಗಳು, ಪಾದಚಾರಿ ಸೇತುವೆಗಳು ಮತ್ತು ಸೈಕ್ಲಿಂಗ್ ಟ್ರ್ಯಾಕ್‌ಗಳು ಯೋಜನೆಯ ಭಾಗವಾಗಿದೆ

Translated by Purushothama Nag

ಎರಡು ಪ್ರಸ್ತಾಪಗಳು – ಉದ್ದವಾದ ಪಾದಚಾರಿ ಮಾರ್ಗಗಳು ಮತ್ತು ವಾರದ ಕೆಲವು ದಿನಗಳಲ್ಲಿ ಪಾದಚಾರಿ ಮೀಸಲು ರಸ್ತೆಗಳು ಬೆಂಗಳೂರು ಮಹಾನಗರ ಪ್ರದೇಶಕ್ಕಾಗಿ ಸಮಗ್ರ ಚಲನಶೀಲತೆ ಯೋಜನೆಯ (ಸಿಎಂಪಿ) ಇತ್ತೀಚಿನ ಕರಡು ಅದರ ನಾಲ್ಕು ವರ್ಷದ ಹಿಂದಿನ ಆವೃತ್ತಿಗಿಂತ ಗಮನಾರ್ಹವಾಗಿ ಭಿನ್ನವಾಗಿದೆ. ನಗರದ ಸಂಚಾರ ಅವ್ಯವಸ್ಥೆಯನ್ನು ಸರಿಪಡಿಸಲು ಅಲ್ಪ ಮತ್ತು ದೀರ್ಘಕಾಲೀನ ಯೋಜನೆಗಳನ್ನು ರೂಪಿಸಲು ಸಿಎಂಪಿ ಸಿದ್ಧಪಡಿಸಲಾಗಿದೆ.

ಸಮಗ್ರ ಸಾರಿಗೆ ಯೋಜನೆ 2019 ರ ಸಂಪೂರ್ಣ ಸಾರಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಆದರೆ ಮೋಟಾರುರಹಿತ ಸಾರಿಗೆ, ಅವುಗಳೆಂದರೆ ಪಾದಚಾರಿಗಳು ಮತ್ತು ಸೈಕಲ್ ಸವಾರರ ಬಗ್ಗೆ ಕಡಿಮೆ ಅಥವಾ ಗಮನ ಹರಿಸದ ಹಿಂದಿನ ಪ್ರಸ್ತಾಪಗಳಿಗಿಂತ ಭಿನ್ನವಾಗಿ, ಹೊಸ ಕರಡು ಸಿಎಂಪಿ ಪಾದಚಾರಿ ಮತ್ತು ಸೈಕ್ಲಿಂಗ್ ಮೂಲಸೌಕರ್ಯಗಳನ್ನು ನಿಗದಿಸಿದೆ. ಇದು ಸಮಗ್ರ ಯೋಜನೆಗೆ ಪೂರಕವಾಗಿದೆಯೇ ಮತ್ತು ಈ ಸೌಲಭ್ಯಗಳು ಸಾಕೆ ಎನ್ನುವುದು ಇನ್ನೂ ಚರ್ಚಿಸಬೇಕಾಗಿದೆ.  ಪ್ರಸ್ತಾಪಗಳು ಹೀಗಿವೆ:

  • ಎತ್ತರದ ಪಾದಚಾರಿ ಸೇತುವೆಗಳು 

ಸಿಎಂಪಿ ತನ್ನ ಮಲ್ಟಿ-ಮೋಡಲ್ ಮೊಬಿಲಿಟಿ ಯೋಜನೆಯಡಿ, 300 ರಿಂದ 1500 ಮೀಟರ್ ಉದ್ದದ 10 ಪಾದಚಾರಿ ಸೇತುವೆಗಳ ರೂಪದಲ್ಲಿ ಬೆಂಗಳೂರಿಗೆ ಒಂದು ಹೊಸ ಪರಿಕಲ್ಪನೆಯನ್ನು ಪ್ರಸ್ತಾಪಿಸಿದೆ, ಇದರ ವೆಚ್ಚ ತಲಾ 10 ಕೋಟಿ ರೂಗಳಾಗಿರುತ್ತದೆ. ಮೆಟ್ರೋ, ರೈಲ್ವೆ ಮತ್ತು ಬಸ್ ನಿಲ್ದಾಣಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸುವುದು ಇದರ ಉದ್ದೇಶವಾಗಿರುತ್ತದೆ. ಎರಡನೆಯ ಹಂತದಲ್ಲಿ ಐದು ಪ್ರಸ್ತಾಪಿಸಿದರೆ, ಇನ್ನೂ ಐದನ್ನು ಮೂರನೇ ಹಂತಕ್ಕೆ ಯೋಜಿಸಲಾಗಿದೆ.

ದೇಶದಲ್ಲಿ ಇಂತಹ ಮೋಟಾರುರಹಿತ ಸಾರಿಗೆಗೆ ಏಕೈಕ ಪೂರ್ವನಿದರ್ಶನ ಮುಂಬೈನಲ್ಲಿದೆ. ಇದು ಪ್ರಮುಖ ಆರ್ಥಿಕ ಕೇಂದ್ರಗಳಿಂದ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಆ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಪ್ರಯಾಣಿಕರನ್ನು ಹೆಚ್ಚಿಸುತ್ತದೆ ಎಂದು ನಗರದ ಯೋಜಕರು ನಂಬಿದ್ದಾರೆ.

ಪಾದಚಾರಿ ಸೇತುವೆಗಳನ್ನು ಪ್ರಸ್ತಾಪಿಸಿರುವ ಹತ್ತು ಸ್ಥಳಗಳು:

  • ವಿಜಯನಗರ ಮೆಟ್ರೋದಿಂದ ಟಿಟಿಎಂಸಿಗೆ
  • ಬನಶಂಕರಿ ಮೆಟ್ರೋದಿಂದ ಟಿಟಿಎಂಸಿಗೆ
  • ಕೆಂಗೇರಿ ಮೆಟ್ರೋದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ
  • ಕೆಂಗೇರಿ ಮೆಟ್ರೋದಿಂದ ನ್ಯೂ ಕೆಂಗೇರಿ ಟೌನ್‌ಶಿಪ್
  • ಯಶವಂತಪುರ ಮೆಟ್ರೋದಿಂದ ಪೂರ್ವ ರೈಲ್ವೆ ನಿಲ್ದಾಣ
  • ಯಶವಂತಪುರ ಮೆಟ್ರೋದಿಂದ ರೈಲ್ವೆ ನಿಲ್ದಾಣ
  • ಜ್ಞಾನಭಾರತಿ ಮೆಟ್ರೋದಿಂದ ರೈಲ್ವೆ ನಿಲ್ದಾಣ
  • ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೊದಿಂದ ಯಶವಂತಪುರ ಟಿಟಿಎಂಸಿಯಿಂದ ಐಐಎಸ್ ಸಿ 
  • ಕೆ.ಆರ್.ಪುರಂ  ಮೆಟ್ರೋದಿಂದ ಉತ್ತರ ರೈಲ್ವೆ ನಿಲ್ದಾಣ
  • ಕೊನಪ್ಪನ ಅಗ್ರಹಾರ ಮೆಟ್ರೋದಿಂದ ಬಿಎಂಟಿಸಿ ನಿಲ್ದಾಣ

[flexiblemap src=”http://data.opencity.in/Data/Bengaluru-CMP-2019-Elevated-Walkways.kml” width=”100%” height=”500px” ]

ನಕ್ಷೆ: ಪಾದಚಾರಿ ಸೇತುವೆಗಳಿಗೆ ಸೂಚಿಸುವ ಸ್ಥಳಗಳು 

  • ಪಾದಚಾರಿಗಳಿಗೆ ಮೀಸಲಾದ ಬೀದಿಗಳು

ಸಿಎಂಪಿ ಯು ಗಮನಾರ್ಹವಾದ ಪಾದಚಾರಿ ಸಾಂದ್ರತೆ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಹೊಂದಿರುವ ಎಂಟು ಬೀದಿಗಳನ್ನು ಗುರುತಿಸಿ ಶನಿವಾರ, ಭಾನುವಾರ, ಇತರ ರಜಾದಿನಗಳು ಮತ್ತು ವಿಶೇಷ ದಿನಗಳಲ್ಲಿ ಪಾದಚಾರಿಗಳಿಗೆ ಮಾತ್ರ ಬೀದಿಗಳಾಗಿ ಘೋಷಿಸಲು ಶಿಫಾರಸು ಮಾಡುತ್ತದೆ. ಈ ವಿಧಾನವನ್ನು ಎಚ್‌ಎಸ್‌ಆರ್ ಲೇಔಟ್ ಈ ಹಿಂದೆ ಉತ್ತಮ ಯಶಸ್ಸಿನೊಂದಿಗೆ ಪ್ರಯತ್ನಿಸಿದೆ, ಎಂಜಿ ರಸ್ತೆಯೂ ಸಹ ಒಂದೆರಡು ಸಂದರ್ಭಗಳಲ್ಲಿ ಈ ವಿಧಾನವನ್ನು ಅಳವಡಿಸಿದೆ. ಉದ್ದೇಶಿತ ಎಂಟು ಪಾದಚಾರಿಗಳಿಗೆ ಮೀಸಲು ಬೀದಿಗಳು:

  • ಕೆ.ಆರ್ ರಸ್ತೆ ಮತ್ತು ಡಿ.ವಿ.ಜಿ ರಸ್ತೆ ನಡುವಿನ ಗಾಂಧಿ ಬಜಾರ್ ಮುಖ್ಯ ರಸ್ತೆ
  • ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಪಕ್ಕದ 10 ನೇ ಮುಖ್ಯ ರಸ್ತೆ
  • ರಸ್ಸೆಲ್ ಮಾರ್ಕೆಟ್ ರಸ್ತೆ
  • ಕಮರ್ಷಲ್ ಸ್ಟ್ರೀಟ್, ಕಮರಾಜ್ ರಸ್ತೆಯಿಂದ ಜುಮಾ ಮಸೀದಿ ರಸ್ತೆವರೆಗೆ
  • ಬ್ರಿಗೇಡ್ ರಸ್ತೆ, ಎಂಜಿ ರಸ್ತೆಯಿಂದ ರೆಸಿಡೆನ್ಸಿ ರಸ್ತೆವರೆಗೆ
  • ಚರ್ಚ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆಯಿಂದ ಬ್ರಿಗೇಡ್ ರಸ್ತೆಯವರೆಗೆ
  • ಮಲ್ಲೇಶ್ವರಂ ನ 7 ನೇ ಕ್ರಾಸ್ ಮತ್ತು 10 ನೇ ಕ್ರಾಸ್ ನಡುವೆ
  • ಮಲ್ಲೇಶ್ವರಂ 8 ನೇ ಕ್ರಾಸ್, ಮಾರ್ಗೋಸಾ ರಸ್ತೆ ಮತ್ತು 18 ನೇ ಸಂಪಿಗೆ ರಸ್ತೆ ನಡುವೆ

[flexiblemap src=”http://data.opencity.in/Data/Bengaluru-CMP-2019-Pedestrian-Streets.kml” width=”100%” height=”500px” ]

ನಕ್ಷೆ: ಪಾದಚಾರಿಗಳಿಗೆ ಮೀಸಲು ಬೀದಿಗಳಿಗಾಗಿ ಸೂಚಕ ಸ್ಥಳಗಳನ್ನು ಪ್ರಸ್ತಾಪಿಸಲಾಗಿದೆ

ಮೋಟಾರುರಹಿತ ಸಾಗಣೆಗೆ ಇತರ ಪ್ರಸ್ತಾಪಗಳು:

  • 174 ಕಿಲೋಮೀಟರ್ ಸೈಕಲ್ ಟ್ರ್ಯಾಕ್‌ನೊಂದಿಗೆ 548 ಕಿಲೋಮೀಟರ್ ಫುಟ್‌ಪಾತ್ ನಿರ್ಮಿಸಲಾಗುವುದು (ಇವೆಲ್ಲವೂ 103 ಕಿಲೋಮೀಟರ್ ಟೆಂಡರ್ ಶ್ಯೂರ್ ಪರಿಕಲ್ಪನೆಯಲ್ಲಿ ನಗರದ ಕೆಲವು ರಸ್ತೆಗಳಲ್ಲಿ ಜಾರಿಗೆ ತರಲಾಗುತ್ತಿದೆ)
  • ಸಾರ್ವಜನಿಕ ಬೈಸಿಕಲ್ ಹಂಚಿಕೆಗಾಗಿ 550 ಹಬ್‌ಗಳನ್ನು ಗುರುತಿಸಲಾಗಿದೆ
  • ಎರಡು ಅಥವಾ ಹೆಚ್ಚಿನ ಸಾರ್ವಜನಿಕ ಸಾರಿಗೆ ಸಂದಿಸುವ 30 ಇಂಟರ್ ರ್ಮಡಲ್ ಇಂಟರ್ ಚೇಂಜ್  ಕೇಂದ್ರಗಳನ್ನು ಶಿಪಾರಸು ಮಾಡಲಾಗಿದೆ. 

Read the original in English here.

About our volunteer translator

Purushothama Nag is from Attibele, and is currently a resident of JP Nagar. He works as a lead software developer. He is a bike rider and avid traveler who’d like to travel all over the world.

Leave a Reply

Your email address will not be published. Required fields are marked *

Similar Story

Are Chennai’s bus stops and terminals truly accessible? A reality check

On World Disability Day, we examine how MoRTH guidelines expose gaps; Chennai bus stops still fail persons with disabilities in basic accessibility.

Fifty-five-year-old Gnana Bharathi, a scientist at the Central Leather Research Institute and a wheelchair user for over two decades, rarely takes the bus anymore. Chennai’s bus stops and termini, he says, are designed in a way that makes independent travel “nearly impossible”— from reaching the stop safely, to getting onto the platform and finally boarding the bus — without physical risk. So, when the Greater Chennai Corporation declared the Vivekananda House Bus Stop on Kamarajar Salai as an accessible, ‘model bus stop’, he decided to try it.“When I arrived at the location in my wheelchair, I couldn’t even access the…

Similar Story

Mumbai’s transport overhaul: Real solutions or a hidden agenda?

The proposed Metro 11 project seems to focus on real estate gains while causing environmental damage and ignoring the needs of commuters.

Maximum City, Glamour City, City of Dreams, City of Struggles — Mumbai wears many names and identities. One of the world's most populous cities, it houses a staggering 2.17 crore people in just 603 square kilometres. Its carrying capacity in terms of accommodating a workforce was exceeded a decade ago, yet the daily inflow continues. Sky-high, artificially inflated real estate prices have pushed many to the distant suburbs, making the daily commute for work or study an arduous struggle. And yet the mobility solutions that the city administration and other powers that be come up with are not only inadequate,…