Translated by Purushothama Nag and Umesh Babu Pillegowda ಪ್ರಮುಖ ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿ (ಪೀಣ್ಯ ರಸ್ತೆ) ಇವೆಲ್ಲವೂ ಯಶವಂತಪುರ ಉಪನಗರದಲ್ಲಿ ಪರಸ್ಪರ ಹತ್ತಿರವಿವೆ. ಆದರೆ ಈ ಸಾರಿಗೆ ವಿಧಾನಗಳು ಸರಿಯಾಗಿ ಸಂಯೋಜಿತವಾಗಿಲ್ಲ, ಇಲ್ಲಿ ಸಾರ್ವಜನಿಕ ಸಾರಿಗೆ ಬಳಸುವಲ್ಲಿ ದೊಡ್ಡ ತೊಂದರೆಗಳು ಉಂಟಾಗುತ್ತಿವೆ. ಹಳೆಯ ರೈಲ್ವೆ ನಿಲ್ದಾಣದಿಂದ ಮೆಟ್ರೊಗೆ 2.3 ಕಿ.ಮೀ ಕೆಳಗಿನ ನಕ್ಷೆಯು ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 1 ಇರುವ ಯಶವಂತಪುರ ಹಳೆ ಪ್ರವೇಶದ್ವಾರದಿಂದ ಮೆಟ್ರೋ ನಿಲ್ದಾಣದವರೆಗಿನ ಅಂತರವನ್ನು ತೋರಿಸುತ್ತದೆ. ಈ ಅಂತರ ಕ್ರಮಿಸುವ ವಿಸ್ತರಣೆಯು ಸುಮಾರು 2.3 ಕಿ.ಮೀ ಉದ್ದ ಆಗಿರುತ್ತದೆ. ಪ್ಲಾಟ್‌ಫಾರ್ಮ್ 8 ಇರುವ ಯಶವಂತಪುರ ಹೊಸ ಪ್ರವೇಶದ್ವಾರದಿಂದ ಮೆಟ್ರೋ ನಿಲ್ದಾಣಕ್ಕೆ ಇರುವ ಅಂತರವು ಚಿಕ್ಕದಾಗಿದೆ. ಆದರೆ ಈ ಎರಡರ ನಡುವೆ ಮೀಸಲಾದ ಮಾರ್ಗದ ಕೊರತೆಯಿಂದಾಗಿ ಪ್ರಯಾಣಿಕರಿಗೆ, ವಿಶೇಷವಾಗಿ ಸರಕು ಸಾಮಾನು ಹೊಂದಿರುವವರಿಗೆ ಮೆಟ್ರೊದಿಂದ ರೈಲ್ವೆಗೆ ಹಾಗೂ ರೈಲ್ವೆಯಿಂದ ಮೆಟ್ರೊಗೆ ಬದಲಾಯಿಸುವುದು ಕಷ್ಟವಾಗುತ್ತದೆ. ರೈಲ್ವೆ ಬಳಕೆದಾರರು ಮಾತ್ರವಲ್ಲ, ಇತರ ಸಾವಿರಾರು…
Read moreWe’re at 19 out of 100 donors. Will you be the next to contribute to our civic engagement work?